ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ ಹೆಚ್ಚುವರಿ ಶುಲ್ಕ ವಾಪಸ್ ನೀಡದಿದ್ದರೆ ಶಾಲೆಗಳನ್ನ ಸರ್ಕಾರ ವಶಕ್ಕೆ ಪಡೆಯುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದ್ದಾರೆ. 449 ಖಾಸಗಿ ಶಾಲೆಗಳಿಗೆ ಶೋಕಾಸ್ ನೋಟಿಸ್ ನೀಡಿರುವ ದೆಹಲಿ ಸರ್ಕಾರ 2 ವಾರಗಳ ಗಡುವು ವಿಧಿಸಿದೆ. ಆಮ್ ಆದ್ಮಿ ಸರ್ಕಾರ ಶಾಲಾ ಆಡಳಿತದ ವಿಷಯದಲ್ಲಿ ಮೂಗು ತೂರಿಸುವುದಿಲ್ಲ. ಆದರೆ, ಆಡಳಿತದಲ್ಲಿ ಶಿಸ್ತು ತರಲು ಪ್ರಯತ್ನ ನಡೆಸುತ್ತೇವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.6ನೇ