ಕೇಂದ್ರ ಸರಕಾರ ರಾಜ್ಯದ ಬರಗಾಲ ಪರಿಹಾರಕ್ಕಾಗಿ 782 ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಕಳೆದ ತಿಂಗಳು ಜೂನ್ 28 ರಂದೇ ಹಣ ಬಿಡುಗಡೆಗೆ ನಿಗದಿಯಾಗಿದ್ದರೂ ಒಂದು ತಿಂಗಳು ತಡವಾಗಿ ಬಿಡುಗಡೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬರಗಾಲ ಪೀಡಿತ ಸಂತ್ರಸ್ಥರಿಗಾಗಿ ಎರಡನೇ ಬಾರಿಗೆ 782 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.