2108ರ ವರದಿಗೆ ಈಗ ಫ್ಯಾಕ್ಟ್ ಚೆಕ್ಕರ್ ಪತ್ರಕರ್ತ ಮೊಹಮದ್ ಜುಬೇರ್ ಅವರನ್ನು ಬಂಧಿಸಿರುವುದನ್ನು ಉಗ್ರವಾಗಿ ಖಂಡಿಸಿರುವ ಸಂಪಾದಕರ ಮಂಡಳಿ, ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ೨೦೧೮ರಲ್ಲಿ ಪ್ರಕಟವಾದ ವರದಿಗೆ ಈಗ ಬಂಧನ ಮಾಡಿರುವುದು ಸರಿಯಾದ ಕ್ರಮವಲ್ಲ, ಅಲ್ಲದೇ ಈ ರೀತಿಯ ಕ್ರಮಗಳು ಪತ್ರಿಕಾ ಸ್ವಾತಂತ್ರ್ಯದ ಹರಣ ಎಂದು ಸಂಪಾದಕರ ಮಂಡಳಿ ಆರೋಪಿಸಿದೆ. ಜರ್ಮನಿಯಲ್ಲಿ ನಡೆದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕಾಗಿದೆ