ನವದೆಹಲಿ : ಬೆಳವಣಿಗೆಗೆ ಅಪಾರ ಅವಕಾಶಗಳನ್ನು ಹೊಂದಿರುವ ಪ್ರಸಾಧನ ಸಾಮಗ್ರಿಗಳ ಆನ್ಲೈನ್ ಮಾರಾಟ ಕ್ಷೇತ್ರಕ್ಕೆ ಲಗ್ಗೆ ಹಾಕಲು ರಿಲಯನ್ಸ್ ಸಂಸ್ಥೆಯ ಮಾಲೀಕ ಮುಕೇಶ್ ಅಂಬಾನಿ ಸಿದ್ಧವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ನೈಕಾ, ಮಿಂತ್ರಾ, ಟಾಟಾ ಕ್ಲಿಕ್ ಹಾಗೂ ಇನ್ನಿತರ ಕಂಪನಿಗಳು ಸ್ಪರ್ಧಾತ್ಮಕವಾಗಿ ವ್ಯವಹಾರಕ್ಕಿಳಿದಿವೆ. ಈ ಕಂಪನಿಗಳಿಗೆ ಪೈಪೋಟಿ ಒಡ್ಡಿ, ಈ ಕ್ಷೇತ್ರದಲ್ಲೂ ರಿಲಯನ್ಸ್ನದ್ದೊಂದು ಅಸ್ತಿತ್ವ ಸ್ಥಾಪಿಸುವ ನಿಟ್ಟಿನಲ್ಲಿ ಅಂಬಾನಿ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಆನ್ಲೈನ್ ಮಾರುಕಟ್ಟೆಯಲ್ಲಿ ಸಕ್ರಿಯವಾಗಿರುವ