ಧರ್ಮ ದೇಶದ ಮೂಲತಳಹದಿಯಾಗಿದ್ದರಿಂದ ಅದನ್ನು ನಿರ್ಲಕ್ಷಿಸುವಂತಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಜನ ಸಂಘ ಸಂಸ್ಥಾಪಕ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಾಗವತ್, ದೇಶದ ಮೂಲವನ್ನು ಮರೆಯುವಂತಿಲ್ಲ. ದೇಶದ ಮೂಲವೇ ಧರ್ಮವಾಗಿದೆ ಎಂದು ತಿಳಿಸಿದ್ದಾರೆ. ದೇಶವನ್ನು ನಾವು ಕುಟುಂಬ ಎಂದು ಕರೆಯುತ್ತೇವೆ. ಕೌಟಂಬಿಕ ಧರ್ಮವನ್ನು ಪಾಲಿಸಬೇಕಾಗಿದೆ. ಭಾರತದ ಸಿದ್ದಾಂತ, ಸಂಸ್ಕ್ರತಿ ದೇಶದ ಮಹತ್ವದ ಸಾರವನ್ನು ಸಾರುತ್ತವೆ