ಪಠ್ಯದಿಂದ ನನ್ನ ಕಥೆಯನ್ನೂ ಕೈಬಿಡಿ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲೊ ನಡೆಯುತ್ತಿರುವ ಪಠ್ಯ ಪರಿಷ್ಕರಣೆ ವಿವಾದ ಕುರಿತ ಚರ್ಚೆಯನ್ನು ಗಮನಿಸಿದ್ದು, ಶಾಲಾ ಮಕ್ಕಳ ಪಠ್ಯವನ್ನು ಕೇಸರೀಕರಣ ಮಾಡುವ ಪ್ರಯತ್ನಕ್ಕೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ೧೦ನೇ ತರಗತಿಯ ಪಠ್ಯದಲ್ಲಿ ನನ್ನದೂ ಒಂದು ಪತ್ರವಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಪಠ್ಯ ಪರಿಷ್ಕರಣೆಯಲ್ಲಿ ಇಲ್ಲ ಅಥವಾ ಉಂಟು ಅಂತ ಗಳಿಗೆಗೊಂದು ಬದಲಾವಣೆ ಆಗುತ್ತಿದೆ.