ನವದೆಹಲಿ : ಸತತ ಐದನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್ (ಬಿಪಿಎಸ್) ಹೆಚ್ಚಿಸಿದೆ.ಈ ನಿರ್ಧಾರದಿಂದ ರೆಪೋ ದರ ಶೇ. 6.25ಕ್ಕೆ ಏರಿಕೆಯಾದಂತಾಗಿದೆ. ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಸಭೆ ನಡೆಸಿ ರೆಪೋ ದರವನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ದರವು ಆಗಸ್ಟ್ 2018 ರಿಂದ ಅತ್ಯಧಿಕ ಮಟ್ಟದಾಗಿದೆ.ಇತ್ತೀಚಿನ ಏರಿಕೆಯೊಂದಿಗೆ, ಹಣದುಬ್ಬರವನ್ನು