ವಿಜಯವಾಡ : ತಮ್ಮ ವಿಭಿನ್ನ ನಿರ್ಧಾರಗಳಿಂದಾಗಿ ಆಗಾಗ ಗಮನ ಸೆಳೆಯುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ, ಸದ್ಯದಲ್ಲೇ ತಮ್ಮ ಇಡೀ ಮಂತ್ರಿಮಂಡಲವನ್ನು ಪುನಾರಚಿಸಲಿದ್ದಾರೆ ಎಂಬ ವದಂತಿಗಳು ಹರಡಿವೆ. ಅದಕ್ಕಾಗಿ ಅವರು ಗುಜರಾತ್ ಮಾದರಿ ಅನುಸರಿಸಲು ಮುಂದಾಗಿದ್ದಾರೆ. ತಮ್ಮ ಮಂತ್ರಿಮಂಡಲದ ಶೇ. 80ರಷ್ಟು ಸಚಿವರನ್ನು ಬದಲಾಯಿಸಲು ರೆಡ್ಡಿ ಸಿದ್ಧವಾಗಿದ್ದು, ಸದ್ಯದಲ್ಲೇ ತಮ್ಮ ಪಕ್ಷದ ಎಲ್ಲಾ ಸಂಸದರು, ಶಾಸಕರನ್ನು ರೆಡ್ಡಿ ಭೇಟಿ ಮಾಡಿ ಈ ಕುರಿತಂತೆ ಚರ್ಚಿಸಲಿದ್ದಾರೆ. ಶಕ್ತಿಶಾಲಿ ನಾಯಕರುಳ್ಳ ಎರಡು ತಂಡಗಳನ್ನು