ಚೆನ್ನೈ: ಜೆ. ಜಯಲಲಿತಾ ತೀರಿಕೊಂಡ ಬಳಿಕ ಎಐಎಡಿಎಂಕೆ ಪಕ್ಷದೊಳಗೆ ಶಶಿಕಲಾ ನಟರಾಜನ್ ಮತ್ತು ಪನೀರ್ ಸೆಲ್ವಂ ನಡುವಿನ ಹೋರಾಟದ ಫಲವಾಗಿ ಪಕ್ಷ ಇಬ್ಬಾಗವಾಗಿದೆ. ಈಗ ಡಿಎಂಕೆ ಸ್ಥಿತಿಯೂ ಅದೇ ಆಗುವ ಹಂತದಲ್ಲಿದೆ.ಎಂ ಕರುಣಾನಿಧಿ ಇಹಲೋಕ ತ್ಯಜಿಸಿ ಇನ್ನೂ ವಾರವಾಗುವ ಮೊದಲೇ ಪಕ್ಷದೊಳಗೆ ಅವರ ಇಬ್ಬರು ಪುತ್ರರ ನಡುವೆ ಅಧಿಕಾರಕ್ಕಾಗಿ ಕಚ್ಚಾಟ ತಾರಕಕ್ಕೇರಿದೆ.ಎಂಕೆ ಅಳಗಿರಿ ಮತ್ತು ಎಂಕೆ ಸ್ಟಾಲಿನ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದ್ದು, ಪಕ್ಷದ ಸೂತ್ರ ತಮ್ಮದೇ ಎಂದು ಇಬ್ಬರೂ ಕಚ್ಚಾಡುತ್ತಿದ್ದಾರೆ.