ಭಾರೀ ಚುನಾವಣಾ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಏಪ್ರಿಲ್ 12ರಂದು ನಡೆಯಬೇಕಿದ್ದ ಚೆನ್ನೈನ ಆರ್.ಕೆ. ನಗರ ಉಪಚುನಾವಣೆಯನ್ನ ಚುನಾವಣಾ ಆಯೋಗ ರದ್ದು ಮಾಡಿದೆ. ಆರೋಗ್ಯ ಸಚಿವ ವಿಜಯಭಾಸ್ಕರ್ ಮನೆ ಮೇಲೆ ಐಟಿ ದಾಳಿ ವೇಳೆ ಮತದಾರರಿಗೆ ಮತಕ್ಕಾಗಿ ಹಣ, ಉಡುಗೊರೆಗಳನ್ನ ನೀಡಿದ್ದ ಬಗ್ಗೆ ಹಲವು ದಾಖಲೆಗಳು ಪತ್ತೆಯಾಗಿದ್ದವು. ಈ ಮಾಹಿತಿಯನ್ನ ಆದಾಯ ತೆರಿಗೆ ಇಲಾಖೆ ಚುನಾವಣಾ ಆಯೋಗಕ್ಕೆ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಉಪಚುನಾವಣೆಯನ್ನ ರದ್ದು ಮಾಡಲಾಗಿದೆ.