ಪ್ರತಿಭಟನೆಗಾಗಿ ಸೈಕಲ್ ಸವಾರಿ ಮಾಡಿ ಟ್ರೋಲ್ ಆದ ರಾಬರ್ಟ್ ವಾದ್ರಾ

ನವದೆಹಲಿ| Krishnaveni K| Last Modified ಮಂಗಳವಾರ, 23 ಫೆಬ್ರವರಿ 2021 (09:31 IST)
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಕಾಂಗ್ರೆಸ್ ಅಧ‍್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ದೆಹಲಿಯ ರಸ್ತೆಯಲ್ಲಿ ಸೈಕಲ್ ನಲ್ಲಿ ಸವಾರಿ ಮಾಡಿದ್ದಾರೆ. ಆದರೆ ಈ ವಿಚಾರಕ್ಕೆ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

 
ಎಸಿ ಕಾರಿನಿಂದ ಹೊರಬಂದು ನೋಡಿ ಎಂದು ಮೋದಿಗೆ ಕುಟುಕಿದ ವಾದ್ರಾ 5 ಲಕ್ಷ ಬೆಲೆ ಬಾಳುವ ಸೈಕಲ್ ನಲ್ಲಿ ಸವಾರಿ ಮಾಡಿದ್ದಾರೆ ಎಂದು ಕೆಲವರು ವ್ಯಂಗ್ಯ ಮಾಡಿದರೆ ಮತ್ತೆ ಕೆಲವರು ಇಡಿ ವಾದ್ರಾರ ಕೋಟ್ಯಂತರ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ. ಹೀಗಾಗಿ ಅವರು ಬೀದಿಗೆ ಬಂದಿದ್ದಾರೆ ಎಂದಿದ್ದಾರೆ. ಇನ್ನು, ವಾದ್ರಾ ಸೈಕಲ್ ಸವಾರಿ ವೇಳೆ ಸರಿಯಾಗಿ ಮಾಸ್ಕ್ ಧರಿಸದೇ ಇದ್ದಿದ್ದನ್ನು ಹಲವರು ಪ್ರಶ್ನಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :