ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದು ವೈಯಕ್ತಿಕ ಕಾರಣಗಳಿಗಾಗಿ ಹೊರತು ತಾರತಮ್ಯಕ್ಕೆ ಬೇಸತ್ತು ಅಲ್ಲ ಎಂದು ತನಿಖಾ ವರದಿ ಬಹಿರಂಗ ಪಡಿಸಿದೆ. ವರದಿಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ವೇಮುಲ ನಿರ್ಧಾರ ಸಂಪೂರ್ಣವಾಗಿ ಆತನದೇ ಆಗಿತ್ತು. ಹೊರತು ಇದರಲ್ಲಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಅಥವಾ ಸರ್ಕಾರದ ಪಾತ್ರವಿಲ್ಲ. ಆತನ ಆತ್ಮಹತ್ಯೆ ಲಾಭವನ್ನು ಪಡೆದುಕೊಳ್ಳಲು ಆತನನ್ನು ದಲಿತನೆಂದು ಬಿಂಬಿಸಲಾಯಿತು. ವಾಸ್ತವವಾಗಿ ಆತ ದಲಿತನೇ ಅಲ್ಲ ಎಂದು ವರದಿ