ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ಖಂಡಿಸಿ ಬಿಹಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಇದುವರೆಗೆ ರೈಲ್ವೆಗೆ 700 ಕೋಟಿ ರೂ.ನಷ್ಟವುಂಟಾಗಿದ್ದು, 718 ಜನರನ್ನು ಬಂಧಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಬಿಹಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ 11 ಇಂಜಿನ್ ಸೇರಿದಂತೆ 60 ರೈಲಿನ ಬೋಗಿಗಳು ಬೆಂಕಿಗೆ ಆಹುತಿಯಾಗಿದೆ.ಇದಲ್ಲದೇ ರೈಲ್ವೆ ಆಸ್ತಿ ನಷ್ಟ ಸೇರಿದಂತೆ ರೈಲ್ವೆ ಇಲಾಖೆಗೆ ಒಟ್ಟಾರೆ ಆಗಿರುವ ನಷ್ಟ ಸುಮಾರು 700 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಬಿಹಾರದ 16 ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.