ತುರ್ತುಪರಿಸ್ಥಿತಿಗೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎನ್ನುವ ಮಾಜಿ ಗುಪ್ತಚರ ಸಂಸ್ಥೆ ಅಧಿಕಾರಿ ಟಿ.ವಿ.ರಾಜೇಶ್ವರ್ ಹೇಳಿಕೆಯನ್ನು ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಆತ್ಮಿಯರಾಗಿದ್ದ ಆರ್.ಕೆ.ಧವನ್ ತಳ್ಳಿಹಾಕಿದ್ದಾರೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಆರೆಸ್ಸೆಸ್ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಬೆಂಬಲ ಸೂಚಿಸಿತ್ತು ಅಥವಾ ತುರ್ತುಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಜನಸಂಘ ಪಕ್ಷವನ್ನು ಮರೆತು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿತ್ತು ಎನ್ನುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾರೆ. ಮಾಜಿ ಗುಪ್ತಚರ ದಳದ ಮುಖ್ಯಸ್ಥ