ಭಾರತವನ್ನು ಆರೆಸ್ಸೆಸ್ನಿಂದ ಮುಕ್ತವಾಗಿಸಿ ಎಂದು ಕರೆ ನೀಡಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು, ದೇಶವನ್ನು ಒಡೆಯುವಂತಹ ಸಿಮಿ, ಐಸಿಎಸ್ ಮತ್ತು ಎಲ್ಇಟಿಯಂತಹ ಉಗ್ರ ಸಂಘಟನೆಗಳ ಬಗ್ಗೆ ಯಾವತ್ತೂ ನಿತೀಶ್ ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಸಂಸದೀಯ ವ್ಯವಹಾರಗಳ ಖಾತೆ ಸಚಿವ ವೆಂಕಯ್ಯನಾಯ್ಡು ಮಾತನಾಡಿ, ದೇಶವನ್ನು ಹಾಳುಗೆಡುವಿದಂತಹ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿತೀಶ್ ಕುಮಾರ್ಗೆ ತೊಂದರೆಯಿಲ್ಲ. ದೇಶದ ಅಭಿವೃದ್ಧಿಗೆ ಅಡ್ಡಿಯಾಗಿರುವ ಇಂತಹ ಕೋಮುವಾದಿ