ರಾಹುಲ್ ಆರೆಸ್ಸೆಸ್ ವಿರುದ್ಧ ಬಳಸಿದ ಪದಗಳು ಮತ್ತು ಆರೆಸ್ಸೆಸ್ನ್ನು ನಾಶಪಡಿಸುತ್ತೇನೆ ಎಂದು ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ಕಾಂಗ್ರೆಸ್ ಪಕ್ಷದ ಅಸಹಿಷ್ಣುತೆಯನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷ ಆರೆಸ್ಸೆಸ್ ನಾಶಪಡಿಸಲು ಹಲವು ದಶಕಗಳಿಂದ ಪ್ರಯತ್ನಿಸುತ್ತಿದೆ. ಆದರೆ, ಆರೆಸ್ಸೆಸ್ ಬೆಳೆಯುವುದನ್ನು ತಡೆಯುವುದು ಸಾಧ್ಯವಾಗಿಲ್ಲ ಎಂದು ಆರೆಸ್ಸೆಸ್ ಮುಖಂಡ ಮನಮೋಹನ್ ವೈದ್ಯ ಲೇವಡಿ ಮಾಡಿದ್ದಾರೆ.