ಸಂಸತ್ತಿನಲ್ಲಿ ಜಿಎಸ್ಟಿ ಅಂಗೀಕಾರವಾಗದಿರಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಸಂಸತ್ ಅಧಿವೇಶನಕ್ಕೆ ನಾಲ್ಕು ದಿನಗಳು ಬಾಕಿ ಉಳಿದಿದ್ದರೂ ಕೇಂದ್ರ ಸರ್ಕಾರ ಪ್ರಮುಖ ಸುಧಾರಣೆಯ ಶಾಸನಕ್ಕೆ ಸಂಬಂಧಿಸಿದಂತೆ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಜತೆ ಮಾತುಕತೆಯ ಯಾವ ಪ್ರಸ್ತಾವನೆಗಳನ್ನಿಟ್ಟಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಬಿಲ್ ಪಾಸಾಗಿಲ್ಲವೆಂದು ಸರ್ಕಾರ ಪ್ರತಿಪಕ್ಷಗಳ ಮೇಲೆ, ಅದರಲ್ಲೂ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದೆ. ಆದರೆ ವಾಸ್ತವವೆಂದರೆ ಜಿಎಸ್ಟಿ ಪಾಸಾಗದಂತೆ ತಡೆ