Widgets Magazine

ಜೂನ್ ವರೆಗೂ ಮುಂದುವರಿಯಲಿದೆ ಲಾಕ್ ಡೌನ್: ನಿಜವೇ? ಸುಳ್ಳೇ?

ನವದೆಹಲಿ| Krishnaveni K| Last Modified ಮಂಗಳವಾರ, 31 ಮಾರ್ಚ್ 2020 (09:28 IST)
ನವದೆಹಲಿ: 21 ದಿನಗಳ ಲಾಕ್ ಡೌನ್ ಆಗಿದ್ದಕ್ಕೇ ಮನೆಯಲ್ಲಿ ಕೂರಂಗಿಲ್ಲ ಹೊರಗಡೆ ತಿರುಗಾಡೋ ಹಾಗಿಲ್ಲ ಎನ್ನುವ ರೀತಿ ಜನರಿಗೆ ಜೈಲು ವಾಸದ ಅನುಭವವಾಗುತ್ತಿದೆ. ಅಂತಹದ್ದರಲ್ಲಿ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ.

 
ಕೆಲವು ಮೂಲಗಳ ಪ್ರಕಾರ ಲಾಕ್ ಡೌನ್ ಸ್ಥಿತಿ ಕೇವಲ 21 ದಿನ ಮಾತ್ರವಲ್ಲ, ಜೂನ್ ತಿಂಗಳವರೆಗೂ ಮುಂದುವರಿಯುವ ಸಾಧ‍್ಯತೆಯಿದೆ ಎನ್ನಲಾಗಿದೆ. ಇಂತಹದ್ದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
 
ದೆಹಲಿಯ ಲೋಕನಾಯಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೊರೋನಾ ರೋಗಿಗಳನ್ನು ನೋಡಿಕೊಳ್ಳಲು ಪಾಸ್ ವಿತರಿಸಲಾಗಿದ್ದು, ಇದರ ವ್ಯಾಲಿಡಿಟಿ ಮಾರ್ಚ್ 25 ರಿಂದ ಜೂನ್ 30ವರೆಗೂ ಇದೆ. ಇದನ್ನು ನೋಡಿ ಇಂತಹದ್ದೊಂದು ಸುದ್ದಿ ಹರಿದಾಡಿತ್ತು.ಆದರೆ ಇದರ ಬೆನ್ನಲ್ಲೇ ಪ್ರೆಸ್ ಇನ್ ಫಾರ್ಮೇಷನ್ ಬ್ಯೂರೋ (ಪಿಐಬಿ) ಸ್ಪಷ್ಟನೆ ನೀಡಿದ್ದು ಇಂತಹ ಸುದ್ದಿಗಳೆಲ್ಲಾ ನಿರಾಧಾರ ಎಂದಿದೆ. ಅಲ್ಲದೆ ಸರ್ಕಾರಕ್ಕೆ ಆ ಬಳಿಕವೂ ಲಾಕ್ ಡೌನ್ ಮುಂದುವರಿಸುವ ಯೋಚನೆಯಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇದರಲ್ಲಿ ಇನ್ನಷ್ಟು ಓದಿ :