ಅಮೆರಿಕನ್ ಡಾಲರ್ ವಿರುದ್ಧ ಸತತ ಮೌಲ್ಯ ಕಳೆದುಕೊಳ್ಳುತ್ತಿರುವ ರೂಪಾಯಿ ಸೋಮವಾರ ದಿನದ ವಹಿವಾಟು ಆರಂಭದಲ್ಲೇ 78ರ ಗಡಿದಾಟಿ ಸಾರ್ವಕಾಲಿಕ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಇದೇ ಮೊದಲ ಬಾರಿಗೆ 78 ಗಡಿ ದಾಟಿದೆ. ವರ್ಷಾಂತ್ಯದ ವೇಳೆಗೆ 80 ರ ಗಡಿದಾಟುವ ನಿರೀಕ್ಷೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಈ ಹಿಂದೆ 77.79ಕ್ಕೆ ಕುಸಿದು ದಾಖಲೆ ಮಾಡಿತ್ತು. ಸೋಮವಾರ ಆರಂಭದಲ್ಲಿ ಶೇ.0.48ರಷ್ಟು ಕುಸಿತ ದಾಖಲಿಸಿ, 78.22ರಲ್ಲಿ ವಹಿವಾಟು ನಡೆಸಿತು. ರೂಪಾಯಿ ಕುಸಿತದಿಂದಾಗಿ ದೇಶದ