ತಿರುವನಂತಪುರಂ: 10-50 ವರ್ಷದೊಳಗಿನ ಮಹಿಳೆಯರೂ ಶಬರಿಮಲೆ ದೇವಾಲಯ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಇದು ಎರಡನೇ ಬಾರಿ ದೇವಾಲಯ ಭಕ್ತರಿಗೆ ತೆರೆದುಕೊಳ್ಳುತ್ತಿದೆ.ನವಂಬರ್ 5 ರಿಂದ ಮತ್ತೆ ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ಕಳೆದ ಬಾರಿಯಂತೆ ಮತ್ತೆ ಮಹಿಳೆಯರ ಪ್ರವೇಶದ ಪ್ರಹಸನಗಳು ನಡೆಯುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ಕಳೆದ ತಿಂಗಳು ಮೊದಲ ಬಾರಿಗೆ ದೇವಾಲಯ ತೆರೆದಾಗ ಪ್ರತಿಭಟನಾಕಾರರ ವಿರೋಧದಿಂದಾಗಿ ಮಹಿಳೆಯರಿಗೆ ಪ್ರವೇಶ ಸಾಧ್ಯವಾಗಲಿಲ್ಲ.ಈ ಬಾರಿ ಮತ್ತೆ ನವಂಬರ್ 5