ತಿರುವನಂತಪುರಂ: ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮೀ ದೇವಾಲಯ ಇಂದಿನಿಂದ ಭಕ್ತಾದಿಗಳಿಗೆ ತೆರೆದುಕೊಳ್ಳಲಿದೆ. ಇಂದಿನಿಂದ ಜುಲೈ 21 ರವರೆಗೆ ಶಬರಿಮಲೆ ದೇವಾಲಯ ತೆರೆದುಕೊಳ್ಳಲಿದೆ. ಆದರೆ ಈ ಬಾರಿ ಕೊರೋನಾ ಕಾರಣದಿಂದ ಭಕ್ತಾದಿಗಳಿಗೆ ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಲಾಗಿದೆ.ಈ ಬಾರಿ ಯಾತ್ರೆ ಕೈಗೊಳ್ಳುವವರು ಕಡ್ಡಾಯವಾಗಿ 48 ಗಂಟೆಗಳ ಮುಂಚಿತ ಆರ್ ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ಕೊಂಡೊಯ್ಯಬೇಕು. ಅಲ್ಲದೆ, ಆನ್ ಲೈನ್ ಬುಕಿಂಗ್ ಮಾಡಿದ ಕೇವಲ 5000 ಭಕ್ತಾದಿಗಳಿಗೆ ಮಾತ್ರ