ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಾಣಿಗಳ ವಧೆ ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ವಾರೆಂಟ್ ಪಡೆದಿದ್ದ ಫೈರ್ಬ್ರ್ಯಾಂಡ್ ಖ್ಯಾತಿಯ ನಾಯಕಿ ಸಾದ್ವಿ ಪ್ರಾಚಿ ಇಂದು ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ. ಪ್ರಾಚಿಯವರಿಗೆ ಹಲವಾರು ಬಾರಿ ಸಮನ್ಸ್ ಜಾರಿಗೊಳಿಸಿದ್ದರೂ ಹಾಜರಾಗದಿದ್ದರಿಂದ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿ ಆದೇಶ ಹೊರಡಿಸಿತ್ತು ಎಂದು ಮೂಲಗಳು ತಿಳಿಸಿವೆ. ನ್ಯಾಯಾಲಯ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಪ್ರಾಚಿ ಇಂದು ತಮ್ಮ ವಕೀಲ ರಾಮ್ಪಾಲ್ ನೆಹ್ರಾ ಅವರೊಂದಿಗೆ ನ್ಯಾಯಮೂರ್ತಿಗಳ