ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ತಮಿಳುನಾಡು ರಾಜಕೀಯದಲ್ಲಿ ಮತ್ತೆ ಬಿರುಗಾಳಿ ಬೀಸಿದೆ. ಪಕ್ಷದಲ್ಲಿ ಮೂಲೆಗುಂಪಾಗಿರುವ ಶಶಿಕಲಾ ಆಪ್ತ ಟಿಟಿವಿ ದಿನಕರನ್ 19 ಶಾಸಕರನ್ನ ರಾಜ್ಯಪಾಲರ ಬಳಿಗೆ ಕರೆದೊಯ್ದು ಸಿಎಂ ಪಳನಿಸ್ವಾಮಿಗೆ ನಮ್ಮ ಬೆಂಬಲವಿಲ್ಲ ಎಂದು ತಿಳಿಸಿದ್ಧಾರೆ. ನಿನ್ನೆ ತಾನೇ ಸಿಎಂ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಹಸ್ತಲಾಘವ ಮಾಡುವ ಮೂಲಕ ಎರಡೂ ಬಣಗಳನ್ನ ವೀಲಿನಗೊಳಿಸಲಾಗಿತ್ತು. ಬಳಿಕ ಪನ್ನೀರ್ ಸೆಲ್ವಂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಇದೀಗ ದಿನಕರನ್ ದಂಡು