ನಿರೀಕ್ಷೆಯಂತೆ ಜಯಲಲಿತಾ ಆಪ್ತೆ ಶಶಿಕಲಾ ಅವರನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ. ಅಣ್ಣಾಡಿಎಂಕೆ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಿಎಂ ಪಳನಿ ಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣ ಈ ಒಮ್ಮತದ ನಿರ್ಧಾರದ ಕೈಗೊಂಡಿದೆ. ವಿಲೀನದ ಸಂದರ್ಭ ಮಾತುಕತೆ ವೇಳೆ ಶಶಿಕಲಾ ಸೇರಿ ಮನ್ನಾರ್ ಗುಡಿ ಗ್ಯಾಂಗ್ aನ್ನ ಪಕ್ಷದ ಹುದ್ದೆಯಿಂದ ಕೆಳಗಿಳಿಸಲು ಪನ್ನೀರ್ ಸೆಲ್ವಂ ಬಣ ಷರತ್ತು ವಿಧಿಸಿತ್ತು. ಅದರಂತೆ ಒಪ್ಪಂದವೂ ಆಗಿತ್ತು.