ತಮಿಳುನಾಡಿನಲ್ಲಿ ಏರ್ಪಟ್ಟಿರುವ ರಾಜಕೀಯ ಹಗ್ಗಜಗ್ಗಾಟ ರಾಜಭವನದ ಅಂಗಳ ಪ್ರವೇಶಿಸಿದೆ. ನಿನ್ನೆಯೇ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮತ್ತು ಸಿಎಂ ಹುದ್ದೆ ಆಕಾಂಕ್ಷಿ ಶಶಿಕಲಾ ಜೊತೆ ಮಾತುಕತೆ ನಡೆಸಿದ ಗವರ್ನರ್ ವಿದ್ಯಾ ಸಾಗರ್ ರಾವ್, ರಾತ್ರಿಯೇ ಕೇಂದ್ರಕ್ಕೆ ವರದಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಶಶಿಕಲಾರಿಂದ ಸರ್ಕಾರ ರಚನೆಗೆ ಹಕ್ಕು ಮಂಡನೆ: ನಿನ್ನೆ ಸಂಜೆ 7.30ರ ಸುಮಾರಿಗೆ ಬೆಂಬಲಿಗ ಸಚಿವರು ಮತ್ತು ಶಾಸಕರ ಜೊತೆ ರಾಜ್ಯಪಾಲರನ್ನ ಭೇಟಿಯಾದ ಶಶಿಕಲಾ, ಶಾಸಕರ ಬೆಂಬಲವಿರುವ ಪತ್ರ