ಆದಾಯಕ್ಕೆ ಮೀರಿದ ಅಧಿಕ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ನಟರಾಜನ್, ಸುಪ್ರೀಂಕೋರ್ಟ್ ಆದೇಶದಂತೆ ಬೆಂಗಳೂರು ಕೋರ್ಟ್`ಗೆ ಹಾಜರಾಗಿದ್ದಾರೆ. ಸಂಜೆ 5.45ರ ಸುಮಾರಿಗೆ ಪತಿ ನಟರಾಜನ್ ಮತ್ತು ಬೆಂಬಲಿಗರ ಜೊತೆ ಕೋರ್ಟ್`ಗೆ ಬಂದ ಶಶಿಕಲಾ, ನ್ಯಾಯಾಧೀಶರ ಮುಂದೆ ಹಾಜರಾದರು. ಈ ಸಂದರ್ಭ ಶಶಿಕಲಾ ವೈದ್ಯಕೀಯ ವರದಿಗಳನ್ನ ಮುಂದಿಟ್ಟು ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದು, ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.ಕಾನೂನು ಪ್ರಕ್ರಿಯೆ ಮುಗಿಸಿದ ಬಳಿಕ ಶಶಿಕಲಾ ನಡೆದುಕೊಂಡೇ ಜೈಲಿಗೆ ತೆರಳಿದರು. ಶಶಿಕಲಾ