ಹಣ ಏನು ಆಕಾಶದಿಂದ ಉದುರುತ್ತಾ? ಹಣದ ಮೂಲ ಬಹಿರಂಗಪಡಿಸಿ: ಸಹಾರಾಗೆ ಸುಪ್ರೀಂ ತಾಕೀತು

ನವದೆಹಲಿ| Rajesh patil| Last Modified ಶುಕ್ರವಾರ, 2 ಸೆಪ್ಟಂಬರ್ 2016 (20:53 IST)
ಹೂಡಿಕೆದಾರರಿಗೆ ಮರಳಿಸಿದ 25 ಸಾವಿರ ಕೋಟಿ ರೂಪಾಯಿ ನಗದು ಹಣವಂತೂ ಆಕಾಶದಿಂದ ಉದುರುವುದಿಲ್ಲ
ಸಹರಾ ಕಂಪೆನಿಗೆ ಯಾವುದು? ಇತರ ಕಂಪೆನಿಗಳಿಂದ ಹಣ ಪಡೆದಿದ್ದೀರಾ? ಅಥವಾ ಇತರ ಯೋಜನೆಗಳಲ್ಲಿರುವ 24 ಸಾವಿರ ಕೋಟಿ ರೂಪಾಯಿ ಹಣ ಬಳಸಿಕೊಂಡಿದ್ದೀರಾ? ಬ್ಯಾಂಕ್‌ಗಳಿಂದ ವಿತ್‌ಡ್ರಾ ಮಾಡಿದ್ದೀರಾ? ಅಥವಾ ಆಸ್ತಿಯನ್ನು ಮಾರಾಟ ಮಾಡಿದ್ದೀರಾ? ಇದರಲ್ಲಿ ಒಂದಂತೂ ಸತ್ಯವಿರಬಹುದು. ಯಾಕೆಂದರೆ ಹಣವಂತೂ ಸ್ವರ್ಗದಿಂದ ಉದುರುವುದಿಲ್ಲ ಎಂದು ಪ್ರಶ್ನೆಗಳ ಸುರಿಮಳೆ ಹಾಕಿದೆ.
ಹೂಡಿಕೆದಾರರಿಗೆ 25 ಸಾವಿರ ಕೋಟಿ ರೂಪಾಯಿಗಳ ನಗದು ಹಣ ಮರಳಿಸಿದ ನಿಮ್ಮ ಕಕ್ಷಿದಾರನ ಯೋಗ್ಯತೆಯ ಬಗ್ಗೆ ಕೋರ್ಟ್‌ಗೆ ಅನುಮಾನವಿಲ್ಲ. ಆದರೆ, ಸಂಪೂರ್ಣ ಪ್ರಕರಣ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಣದ ಮೂಲವನ್ನು ನ್ಯಾಯಾಲಯದ ಮುಂದೆ ತಿಳಿಸಿ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಸಹರಾ ಕಂಪೆನಿಯ ಪರ ವಕೀಲರಿಗೆ ಕೋರಿದ್ದಾರೆ.ನ್ಯಾಯಮೂರ್ತಿಗಳಾದ ಎ.ಆರ್.ದವೆ ಮತ್ತು ಎ.ಕೆ.ಸಿಕ್ರಿ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 16 ಕ್ಕೆ ಮುಂದೂಡಿದ್ದು, ಅಂದು ಹಣ ಯಾವ ಮೂಲದಿಂದ ಬಂತು ಎನ್ನುವುದರಿಂದ ವಿಚಾರಣೆ ಆರಂಭವಾಗಲಿ ಎಂದು ನ್ಯಾಯಮೂರ್ತಿಗಳು ಸಹಾರಾ ಕಂಪೆನಿ ಪರ ವಕೀಲರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :