ಲಕ್ನೋ : ನರ್ಸರಿಗೆ ಹೋಗುತ್ತಿರುವ ಮೂರು ವರ್ಷದ ಮಗುವಿನ ಮೇಲೆ ಖಾಸಗಿ ಶಾಲೆಯ ಬಸ್ ಚಾಲಕ ಅತ್ಯಾಚಾರ ಎಸಗಿರುವ ಘಟನೆ ಗ್ರೇಟರ್ ನೋಯ್ಡಾದ ಗುರುಗ್ರಾಮದಲ್ಲಿ ನಡೆದಿದೆ. ಪ್ರತಿದಿನ ನರ್ಸರಿಗೆ ಬಸ್ನಲ್ಲಿ ಹೋಗುತ್ತಿದ್ದ ಮಗು ಅಕ್ಟೋಬರ್ 9ರಂದು ಬಸ್ ನಲ್ಲಿ ಮನೆಗೆ ಮರಳುತ್ತಿದ್ದಾಗ ಆಕೆಯ ಮೇಲೆ ಶಾಲೆಯ ಬಸ್ ಚಾಲಕ ಬಸ್ ನಲ್ಲೇ ಅತ್ಯಾಚಾರ ಎಸಗಿದ್ದಾನೆ. ಮನೆಗೆ ಬಂದು ಜೋರಾಗಿ ಅಳುತ್ತಿದ್ದ ಮಗುವನ್ನು ಅಪ್ಪ ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.