ಕೊರೊನಾದಿಂದಾಗಿ ಬಂದ್ ಆಗಿದ್ದ ಶಾಲಾ – ಕಾಲೇಜ್ ಗಳು ಮತ್ತೆ ಶುರುವಾಗುತ್ತಿವೆ. ಅಕ್ಟೋಬರ್ 15 ರಿಂದ ಕಾಲೇಜ್ ಗಳನ್ನು ಶುರುಮಾಡಲು ಆಂಧ್ರಪ್ರದೇಶಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಈ ಸಂಬಂಧ ಆಂಧ್ರಪ್ರದೇಶದ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಹಲವು ಹಂತಗಳಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಕಾಲೇಜ್ ಗಳನ್ನು ಆರಂಭ ಮಾಡಲು ಅಗತ್ಯ ಮಾರ್ಗದರ್ಶಿ ಸೂಚನೆಗಳನ್ನು ರೂಪಿಸಲಾಗಿದೆ.