ತನ್ನ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನೇ ಸತತ ಮೂರು ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ ಝಂಝುನುವನಲ್ಲಿ ನಡೆದಿದೆ. ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿರುವ ಸುದ್ದಿಯ ಪ್ರಕಾರ 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ಮೇಲೆ ಶಾಲಾ ಆವರಣದಲ್ಲಿ ಮತ್ತು ಶಾಲೆಯ ಹೊರಗಡೆ ಸಹ ಕಾಮುಕ ಶಿಕ್ಷಕ ಅತ್ಯಾಚಾರವೆಸಗಿದ್ದಾನೆ. ಶಾಲಾ ಅವಧಿ ಹೊರತು ಪಡಿಸಿ ಉಳಿದ ಸಮಯದಲ್ಲಿ ಸಹ ಆಕೆಯನ್ನು ಏನಾದರೂ ನೆಪ ಹೇಳಿ ಕರೆಸಿಕೊಳ್ಳುತ್ತಿದ್ದ ಶಿಕ್ಷಕ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ.