ನವದೆಹಲಿ : ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ 72 ಗಂಟೆಯ ಒಳಗಡೆ ಅದಾನಿ ಸಮೂಹದ ಬಗ್ಗೆ ಹಿಂಡೆನ್ಬರ್ಗ್ ಪ್ರಕಟಿಸಿದ ಆರೋಪಕ್ಕೆ ವರದಿ ನೀಡಬೇಕೆಂದು ಅದಾನಿ ಕಂಪನಿಯ ಮಾಜಿ ವಕೀಲ, ಭಾರತ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಹೇಳಿದ್ದಾರೆ.ಮಾಧ್ಯಮದ ಜೊತೆ ಮಾತನಾಡಿದ ಅವರು, ಗೌತಮ್ ಆದಾನಿ ಅವರನ್ನು ಕರೆದು ಪ್ರತಿಕ್ರಿಯೆ ಪಡೆಯಬೇಕು. ಬಳಿಕ ಕೆಲ ಕ್ಷೇತ್ರಗಳಲ್ಲಿ ಕಾಳಜಿ ಇದೆ ಅಥವಾ ಈ ವರದಿ ಅಸಂಬದ್ಧ ಎಂದು ಸ್ಪಷ್ಟಪಡಿಸಬೇಕು