ಹೋಳಿಹಬ್ಬದ ಸಂಭ್ರಮದ ವೇಳೆ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ 17 ವರ್ಷದ ಹುಡುಗನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಬಾದಶಹಪುರದಲ್ಲಿ ನಡೆದಿದೆ. ಮೃತನನ್ನು ರಾಹುಲ್ ಎಂದು ಗುರುತಿಸಲಾಗಿದೆ. ಈತ 25 ಆಳದ ಬಾವಿಗೆ ಬಿದ್ದು, ನೀರಿನ ಸೆಲೆಗೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಇನ್ಸ್ಪೆಕ್ಟರ್ ದಿನಕರ್, ಇಲ್ಲಿನ ಬಾದಶಹಪುರದಲ್ಲಿ ಹೋಳಿ ಸಂಭ್ರಮದ ವೇಳೆ ರಾಹುಲ್ ತನ್ನ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಯಸಿದ್ದಾನೆ.ರಾಹುಲ್, ಲಲಿತ್ ಸೇರಿದಂತೆ