ಶಿವಸೇನೆ ಸಂಸದ ಸಂಜಯ್ ರಾವುತ್ ಪ್ರಧಾನಿ ಮೋದಿಯನ್ನು ತೆಗಳಿ ರಾಹುಲ್ ಗಾಂಧಿಯನ್ನು ಹೊಗಳಿರುವುದು ಬಿಜೆಪಿಗೆ ಆಕ್ರೋಶ ಉಂಟು ಮಾಡಿದೆ. ಇದೀಗ, ಶಿವಸೇನೆ ನಾಯಕರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಸಚಿವ ವಿನೋದ್ ತಾವಡೆ ಉಪಸ್ಥಿತರಿದ್ದ ಸಭೆಯಲ್ಲಿಯೇ ಶಿವಸೇನೆ ಮುಖಂಡ ಸಂಜಯ್ ರಾವತ್, ಕಳೆದ 2014ರಲ್ಲಿದ್ದ ಮೋದಿ ಅಲೆ ಇದೀಗ ಅಂತ್ಯವಾಗಿದೆ. ಜನರು ಜಿಎಸ್ಟಿ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಪ್ರಭುದ್ಧರಾಗಿದ್ಪು