ಒಂದು ಪಕ್ಷದ ಸಭೆ ಎಂದರೆ ಅದರಲ್ಲಿ ಹಿರಿಯ ನಾಯಕರ ಶ್ರಮವನ್ನು ಮೊದಲಿಗೆ ಸ್ಮರಿಸಲಾಗುತ್ತದೆ. ಆದರೆ ಅಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ಸಭೆಯಲ್ಲಿ ಜಿಲ್ಲೆಯ ಹಿರಿಯ ನಾಯಕರೇ ಮಾಯವಾಗಿದ್ದು ಚರ್ಚೆಗೆ ಕಾರಣವಾಗಿದೆ.ಮಂಗಳೂರುನಲ್ಲಿ ಕಾಂಗ್ರೆಸ್ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿತ್ತು. ವೇದಿಕೆಯಲ್ಲಿ ಹಾಕಲಾಗಿದ್ದ ಬೃಹತ್ ಕಟೌಟ್ ನಲ್ಲಿ ಜಿಲ್ಲೆಯ ನಾಯಕರು ಫೋಟೋಗಳು ಮಾಯವಾಗಿದ್ದವು. ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಷ್ಟ್ರ ರಾಜಕಾರಣದಲ್ಲಿ ಮಿಂಚಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ