ಹೈಟೆಕ್ ಸೆಕ್ಸ್ ರಾಕೆಟ್ : ಐವರು ಆರೋಪಿಗಳ ಬಂಧನ

ನವಾನ್‌ಶಹರ್(ಪಂಜಾಬ್)| Rajesh patil| Last Modified ಶನಿವಾರ, 27 ಮೇ 2017 (17:19 IST)
ಬಾಡಿಗೆ ಮನೆಯೊಂದರಲ್ಲಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ನವಿ ಅಬಾದ್ ಪ್ರದೇಶದ ಕಾರ್ಯಂ ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಪ್ರೇಮ್ ಪಾಲ್ ಅಲಿಯಾಸ್ ಮಣಿ ಮತ್ತು ಕುಲದೀಪ್ ರಾಜ್ ಎನ್ನುವವರು ಸೆಕ್ಸ್ ರಾಕೆಟ್ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ಗ್ರಾಹಕನಂತೆ ಮಾರುವೇಷದಲ್ಲಿದ್ದ ಪೊಲೀಸ್ ಪೇದೆಯೊಬ್ಬ ಆರೋಪಿ ಪ್ರೇಮ್ ಪಾಲ್‌ಗೆ 2000 ರೂಪಾಯಿ ನೀಡುತ್ತೇನೆ. ಯಾವುದಾದರೂ ಸುಂದರವಾದ ಯುವತಿಯಿದ್ದರೆ ಕಳುಹಿಸಿಕೊಡಿ ಎಂದು ಕೋರಿದ್ದಾನೆ. ಇದನ್ನು ನಂಬಿದ ಪ್ರೇಮ್, ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಕೂಡಲೇ ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಯುವತಿಯರು ಸೇರಿದಂತೆ ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಯುವತಿಯರನ್ನು ಕರೆದೊಯ್ಯಲು ಬಳಸುತ್ತಿದ್ದ ದ್ವಿಚಕ್ರ ವಾಹನದ ಸಂಖ್ಯೆಯನ್ನು ಹೊಂದಿದ್ದ ಕಾರನ್ನು ಕೂಡಾ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಆರೋಪಿಗಳು ಪ್ರತಿ ಗಂಟೆಗೆ 5 ಸಾವಿರ ರೂಪಾಯಿಗಳಿಂದ 10 ಸಾವಿರ ರೂಪಾಯಿಗಳವರೆಗೆ ವಸೂಲಿ ಮಾಡುತ್ತಿದ್ದರು. ಅದರಲ್ಲಿ ಅರ್ಧದಷ್ಟು ಹಣನ್ನು ತಾವಿಟ್ಟುಕೊಂಡು ಉಳಿದ ಹಣವನ್ನು ಯುವತಿಯರಿಗೆ ನೀಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :