ನವದೆಹಲಿ : ಟಿವಿ ವರದಿಗಾರನೊಬ್ಬ ಪತ್ರಕರ್ತೆ ಮಹಿಳೆಯೊಬ್ಬಳನ್ನು ಅಪಹರಿಸಿ ಆಕೆಗೆ ದೈಹಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪವೊಂದು ಕೇಳಿಬಂದಿದೆ. ರಿಪಬ್ಲಿಕ್ ಟಿವಿಯ ಅಸ್ಸಾಂ ಪ್ರತಿನಿಧಿ ಅನಿರುದ್ಧ್ ಬಕತ್ ಎಂಬುವವರು ಗುವಾಹಟಿ ಮೂಲದ ಪತ್ರಕರ್ತೆಯೊಬ್ಬಳನ್ನು ಅಪಹರಿಸಿ ಜೋಯ್ನಗರದಲ್ಲಿರುವ ಮನೆಯೊಂದರಲ್ಲಿ ಕೂಡಿ ಹಾಕಿ ಆಕೆಗೆ ದೈಹಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ನಂತರ ಆಕೆಯ ಸಹೋದ್ಯೋಗಿಗಳು ಆಕೆಯನ್ನು ರಕ್ಷಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತೆ ಬಕತ್ ವಿರುದ್ಧ ಗುವಾಹಟಿಯ ದಿಸ್ಪುರ್ ಪೊಲೀಸ್