ಲಕ್ನೋ : ವಿಧಾನಸಭೆ ಚುನಾವಣೆಗೆ ಫೆ.10 ರಿಂದ ಮತದಾನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನೆ-ಮನೆ ಪ್ರಚಾರ ಮಾಡಿದ್ದಾರೆ.ಕೊರೊನಾ ಹಿನ್ನೆಲೆಯಲ್ಲಿ ಬಹಿರಂಗ ರ್ಯಾಲಿ, ಪ್ರಚಾರ, ಸಭೆಗಳಿಗೆ ಚುನಾವಣಾ ಆಯೋಗವು ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕೆಲವು ಹಳ್ಳಿಗಳಿಗೆ ಹೋಗಿದ್ದಾರೆ. ಕಾಲ್ನಡಿಗೆಯಲ್ಲೇ ಮನೆ- ಮನೆ ಬಾಗಿಲಿಗೆ ಹೋಗಿ ಮತ ಯಾಚಿಸಿದ್ದಾರೆ. ಸಮಾಜವಾದಿ ಪಕ್ಷಗಳ ಆಡಳಿತಾವಧಿಯಲ್ಲಿ ಸಾವಿರಾರು ಹಿಂದೂ ಕುಟುಂಬಗಳು ಗುಳೆ ಹೋಗಿದ್ದ ಉತ್ತರಪ್ರದೇಶ