ಬಂಡಾಯ ನಾಯಕ ಶರದ್ ಯಾದವ್ ಅವರೊಂದಿಗೆ ಯಾವುದೇ ಸಾಮರಸ್ಯದಿಂದ ಬಾಗಿಲನ್ನು ಮುಚ್ಚಿರುವ ಜೆಡಿಯು ಮುಖ್ಯಸ್ಥ, ಬಿಹಾರ್ ಸಿಎಂ ನಿತೀಶ್ ಕುಮಾರ್, ಬಿಜೆಪಿಯೊಂದಿಗೆ ಮೈತ್ರಿ ಪಕ್ಷದ ನಿರ್ಧಾರವಾಗಿತ್ತೇ ಹೊರತು ನನ್ನ ನಿರ್ಧಾರವಾಗಿರಲಿಲ್ಲ, ಶರದ್ ಯಾದವ್ ತಮಗಿಷ್ಟ ಬಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಶರದ್ ಯಾದವ್ ಅವರು ತಮಗೆ ಪೂರಕವಾದ ತೀರ್ಮಾನ ತೆಗೆದುಕೊಳ್ಳಲು ಮುಕ್ತರಾಗಿದ್ದಾರೆ. ಪಕ್ಷ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ. ಪಕ್ಷದ ಒಪ್ಪಿಗೆಯೊಂದಿಗೆ ನಾನು ನಿರ್ಧಾರ ತೆಗೆದುಕೊಂಡಿದ್ದೇನೆ. ಅವರು