ಪತಿಯ ಆರೋಗ್ಯ ವಿಚಾರಣೆಗಾಗಿ ಐದು ದಿನಗಳ ಪೆರೋಲ್ ಮೇಲೆ ಹೊರಬಂದಿದ್ದ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ, ಇಂದು ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಜೈಲಿಗೆ ಮರಳಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ, ಮೊದಲ ಬಾರಿಗೆ ಷರತ್ತು ಆಧಾರಿತ ಪೆರೋಲ್ ಮೇಲೆ ಹೊರಬಂದಿದ್ದರು. ಅಕ್ಟೋಬರ್ 6 ರಂದು ಹೊರಬಂದಿದ್ದ ಶಶಿಕಲಾ, ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಪತಿ ನಟರಾಜನ್ ಯೋಗಕ್ಷೇಮ