ಬೆಂಬಲಿಗ ಶಾಸಕರ ಪರೇಡ್ ಮಾಡಲು ಅವಕಾಶ ನೀಡಿ ಎಂದು ಎಐಎಡಿಎಂಕೆ ನಾಯಕಿ ಶಶಿಕಲಾ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ತಮ್ಮ ಬೆಂಬಲಿಗ ಶಾಸಕರು ಪರೇಡ್ ಮಾಡಲು ಸಿದ್ದರಾಗಿದ್ದಾರೆ. ಅವರ ಸಂಖ್ಯೆಯನ್ನು ನೋಡಿ ನಿರ್ಧಾರ ತೆಗೆದುಕೊಂಡು ನನಗೆ ಕೂಡಲೇ ಸರಕಾರ ರಚಿಸಲು ಆಹ್ವಾನ ನೀಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಕಾಯುವಂತೆ ಶಶಿಕಲಾಗೆ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಹೇಳಿರುವುದು ಶಶಿಕಲಾ ಬೆಂಬಲಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.