ಭೋಪಾಲ್ : ಸಹೋದರನ ಜೊತೆ ಜಗಳವಾಡಿ 18ರ ಯುವತಿ ಮೊಬೈಲ್ ಫೋನ್ ನುಂಗಿ ಎಡವಟ್ಟು ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಭಿಂಡ್ ಪ್ರದೇಶದಲ್ಲಿ ನಡೆದಿದೆ. ಯುವತಿ ಮೊಬೈಲ್ ನುಂಗಿದ ವಿಚಾರ ಗೊತ್ತಾಗುತ್ತಿದ್ದಂತೆಯೇ ಆಕೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಸರ್ಜರಿ ಮಾಡಲಾಗಿದೆ. 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮೊಬೈಲ್ ಫೋನ್ ಅನ್ನು ಆಕೆಯಿಂದ ಹೊಟ್ಟೆಯಿಂದ ತೆಗೆಯಲಾಗಿದೆ. ಸದ್ಯ ಆಕೆಯ ಸ್ಥಿತಿ ಸ್ಥಿರವಾಗಿದೆ. ಮೊಬೈಲ್ ನುಂಗಿದ ಕೂಡಲೇ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ.