ನವದೆಹಲಿ : ಶುಕ್ರವಾರ ನಡೆದ ಅವಿಶ್ವಾಸ ನಿರ್ಣಯ ಮಂಡನೆ ಗೊತ್ತುವಳಿ ಚರ್ಚೆಯ ಸದಸನಕ್ಕೆ ಗೈರು ಹಾಜರಾಗಿರುವ ಶಿವಸೇನೆ ಇದೀಗ ನಿನ್ನೆ ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ ಭಾಷಣದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದೆ. ಈ ಕುರಿತು ಮಾತನಾಡಿರುವ ಶಿವಸೇನೆ ಮುಖಂಡ ಸಂಜಯ್ ರಾವತ್, ರಾಹುಲ್ ಅವರ ನಿನ್ನೆಯ ಭಾಷಣ ನಿಜಕ್ಕೂ ಅದ್ಭುತವಾಗಿತ್ತು. ತಮ್ಮ ಭಾಷಣದಲ್ಲಿ ರಾಹುಲ್ ಪ್ರಸ್ತಾಪಸಿದ ಅಂಶಗಳು ಖಂಡಿತ ದೇಶದ ಜನರನ್ನು ಮುಟ್ಟಿವೆ ಎಂದು ರಾವತ್ ತಿಳಿಸಿದ್ದಾರೆ.