ಅಹ್ಮದಾಬಾದ್ : ಇಲಿಯ ಆಟಕ್ಕೆ ಮನೆ ಬೆಂಕಿಗಾಹುತಿಯಾದ ಘಟನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದಿದೆ. ಮನೆಯಲ್ಲಿ ದೇವರ ದೀಪ ಉರಿಸಲು ಬತ್ತಿ ಇಟ್ಟು ದೀಪ ಹಚ್ಚಲಾಗಿತ್ತು. ಈ ದೀಪ ಉರಿಯುತ್ತಿರುವಾಗಲೇ ಇಲಿಯೊಂದು ಬತ್ತಿಯನ್ನು ಹೊತ್ತೊಯ್ದಿದೆ. ಅಲ್ಲದೇ ಬೆಂಕಿ ಉರಿಯುತ್ತಿದ್ದ ಬತ್ತಿಯೊಂದಿಗೆ ಮನೆ ತುಂಬೆಲ್ಲಾ ಓಡಾಡಿದೆ. ಪರಿಣಾಮ ಬಟ್ಟೆಗೆ ಬತ್ತಿಯಿಂದ ಬೆಂಕಿ ಹೊತ್ತಿಕೊಂಡಿದ್ದು, ಮನೆಯೆಲ್ಲಾ ಬೆಂಕಿ ಆವರಿಸಿದೆ. ಪರಿಣಾಮ ಮನೆಯಲ್ಲಿ ಇಟ್ಟಿದದ ಎರಡು ಲಕ್ಷ ನಗದು ಹಾಗೂ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿದೆ