ಚೆನ್ನೈ : ಮಹಿಳೆಯರು ಧಾರಾವಾಹಿ ನೋಡುತ್ತಾ ಕೂತರೆ ಜಗತ್ತೇ ತಲೆಕೆಳಗಾದರೂ ಗೊತ್ತಾಗುವುದಿಲ್ಲ ಎಂಬುದು ಹಲವು ಪುರುಷರ ಆರೋಪ.ತಮಿಳುನಾಡಿನಲ್ಲಿ ನಡೆದಿರುವ ಘಟನೆಯೊಂದನ್ನು ಕೇಳಿದರೆ ನಿಮಗೂ ಇದು ಸತ್ಯ ಎನಿಸುವುದು ಗ್ಯಾರಂಟಿ.ಧಾರಾವಾಹಿ ನೋಡುತ್ತಾ ಕುಳಿತಿದ್ದ ಮಹಿಳೆಯರಿಬ್ಬರು ಜಗತ್ತಿನ ಅರಿವೇ ಇಲ್ಲದಂತೆ ಕುಳಿತಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ನಾಲ್ವರು ಕಳ್ಳರು ಮನೆಯೊಳಗೆ ನುಗ್ಗಿ 19 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.ಆಗ ಮನೆಯೊಳಗೆ ನುಗ್ಗಿದ ಮುಸುಕುಧಾರಿ ದರೋಡೆಕೋರರಿಬ್ಬರು ತೆರೆದ ಬಾಗಿಲಿನಿಂದ ಸೈಲೆಂಟಾಗಿ ಒಳಗೆ