ಇಂಫಾಲ : ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಾಂಗ್ಪೋಕಿ ಜಿಲ್ಲೆಯಲ್ಲಿ ನಿಷೇಧಿತ ಭಯೋತ್ಪಾದಕ ಗುಂಪುಗಳು ಮಂಗಳವಾರ ಬೆಳಗ್ಗೆ ಕುಕಿ-ಜೋ ಸಮುದಾಯಕ್ಕೆ ಸೇರಿದ ಮೂವರು ಆದಿವಾಸಿಗಳನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಷೇಧಿತ ಭಯೋತ್ಪಾದಕರು ಇಂಫಾಲ ಮತ್ತು ಕಾಂಗ್ಪೋಕಿ ಜಿಲ್ಲೆಗಳ ಗಡಿಭಾಗದಲ್ಲಿರುವ ಇರೆಂಗ್ ಮತ್ತು ಕರಮ್ ಪ್ರದೇಶಗಳ ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಮೂವರನ್ನು ಹತ್ಯೆಗೈದಿದ್ದಾರೆ ಎಂದು ವರದಿಗಳು ತಿಳಿಸಿವೆ.ಈ ಗ್ರಾಮವು ಬೆಟ್ಟದ ತುದಿಯಲ್ಲಿದ್ದು, ಬುಡಕಟ್ಟು ಜನರ ಪ್ರಾಬಲ್ಯವನ್ನು ಹೊಂದಿದೆ.