ನವದೆಹಲಿ: ಸರಳ ಮದುವೆಗೆ ಉದಾಹರಣೆಯಾಗಿ ರೈಲಿನಲ್ಲಿ ಮದುವೆಯೊಂದು ನಡೆದಿದ್ದು, ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಅವರು ಈ ಮದುವೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿಕೊಟ್ಟಿದ್ದಾರೆ. ಫಾರ್ಮಸಿಸ್ಟ್ ಆಗಿರುವ ಸಚಿನ್ ಕುಮಾರ್ ಮತ್ತು ಕಂದಾಯ ಇಲಾಖೆ ಉದ್ಯೋಗಿ ಜ್ಯೋತ್ಸ್ನಾ ಉತ್ತರ ಪ್ರದೇಶದ ಗೋರಖ್ಪುರ ಮತ್ತು ಲಖನೌ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಈ ಮದುವೆಯಾಗಿದ್ದಾರೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಮದುವೆ ಸರಳವಾಗಿರಬೇಕು ಎಂಬ ಸಂದೇಶವನ್ನು ಈ ಮೂಲಕ ಎಲ್ಲೆಡೆ ಸಾರಲು ಇಚ್ಛಿಸುತ್ತೇನೆ.