ಡ್ರೆಸ್ ವಿಚಾರಕ್ಕೆ ಜಗಳವಾಡಿದ ಸಹೋದರಿಯರು. ಆಮೇಲೆ ನಡೆದದ್ದೇನು ಗೊತ್ತಾ?

ಒಡಿಶಾ, ಮಂಗಳವಾರ, 11 ಡಿಸೆಂಬರ್ 2018 (07:31 IST)

ಒಡಿಶಾ : ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ ಸಹೋದರಿಯರಲ್ಲೊಬ್ಬಾಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದ ಕೇಂದ್ರಪರ ಜಿಲ್ಲೆಯ ಬರೋ ಗ್ರಾಮದಲ್ಲಿ ನಡೆದಿದೆ.


ಮೊನಾಲಿಸಾ ಆತ್ಮಹತ್ಯೆ ಮಾಡಿಕೊಂಡ ಸಹೋದರಿ. ಜೈಪುರದ ಕೈಪಾಡದಲ್ಲಿರೋ ಕಾಶಿನಾಥ್ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈಕೆ ತನ್ನ ಸಹೋದರಿಯ ಜೊತೆ ಭಾಬಗ್ರಹಿ ಕಲಾನಿಕೇತನದಲ್ಲಿ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಳು. ಇತ್ತೀಚೆಗೆ ಶಿಕ್ಷಕಿಯೊಬ್ಬರ ಬಳಿ ಕಥಕ್ ಕಲಿಯಲೆಂದು ತೆರಳಿದ್ದ ಈ ಸಹೋದರಿಯರು ನಂತರ ಮನೆಗೆ ಬಂದು ಬಟ್ಟೆಗಾಗಿ ಜಗಳವಾಡಿದ್ದಾರೆ.


ಈ ಜಗಳ ವಿಪರೀತಕ್ಕೇರಿದ್ದು ಮನನೊಂದ ಮೊನಾಲಿಸಾ ಮನೆಯ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೂಡಲೇ ಮೊನಲಿಸಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಅದಾಗಲೇ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ

ನವದೆಹಲಿ : ಲೋಕಸಭೆಯ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ...

news

ಕುಖ್ಯಾತ ಅಂತರಾಜ್ಯ ಮನೆ ಕಳ್ಳರ ಬಂಧನ

ಮನೆ ಕಳ್ಳತನ ಮಾಡುವುದರಲ್ಲಿ ಕುಖ್ಯಾತರಾಗಿದ್ದ ತ್ರಿಮೂರ್ತಿಗಳ ಹೆಡೆಮುರಿ ಕಟ್ಟುವಲ್ಲಿ ಕೊನೆಗೂ ಪೊಲೀಸರು ...

news

ಯಡಿಯೂರಪ್ಪ ಸತ್ಯ ಹರಿಶ್ಚಂದ್ರನಾ? ಎಂದು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ

ಬಿಜೆಪಿಯವರು ಎಲ್ಲೆಲ್ಲಿ ಕುಳಿತು ವರ್ಗಾವಣೆ ದಂಧೆ ಮಾಡಿದ್ರು ಅನ್ನೋದು ನಮಗೆ ಗೊತ್ತಿಲ್ವೇ? ಯಡಿಯೂರಪ್ಪ ಏನು ...

news

ಮಂಡ್ಯ ಬಸ್ ದುರಂತ ಪ್ರಕರಣ: ಬಸ್ ಚಾಲಕ ಅರೆಸ್ಟ್

ವಿಸಿ ನಾಲೆಗೆ ಬಸ್ ಉರುಳಿ 30 ಮಂದಿ ಜಲ ಸಮಾಧಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 15 ದಿನಗಳ ...