ಕೋಲ್ಕತ್ತಾ : ದೆಹಲಿಯಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಹೊಗೆ ಉಂಟಾಗಿರುವಂತೆ ಎಚ್ಚರಿಕೆ ಬಾರಿಸಿಕೊಂಡಿದ್ದು, ವಿಮಾನವನ್ನು ಸೂಕ್ತ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಿಕೊಂಡು ಕೋಲ್ಕತ್ತಾದಲ್ಲಿ ಇಳಿಸಲಾಗಿದೆ. ಆದರೆ ವಿಮಾನದಲ್ಲಿ ಹೊಗೆ ಅಥವಾ ಬೆಂಕಿ ಉಂಟಾಗಿರಲಿಲ್ಲ, ಅದು ಕೇವಲ ತಾಂತ್ರಿಕ ದೋಷದಿಂದ ಎಚ್ಚರಿಕೆಯ ಸೂಚನೆ ನೀಡಲಾಗಿದೆ ಎನ್ನಲಾಗಿದೆ.ಭಾನುವಾರ ದೆಹಲಿಯಿಂದ ಹೊರಟಿದ್ದ ವಿಮಾನ 6ಇ-2513(ವಿಟಿ-ಐಜೆಎ) ನಲ್ಲಿ ಸರಕುಗಳನ್ನು ಇಡಲಾಗಿದ್ದ ಪ್ರದೇಶದಲ್ಲಿ ಹೊಗೆ ಉಂಟಾಗಿರುವಂತೆ ಎಚ್ಚರಿಕೆ ಬಾರಿಸಿಕೊಂಡಿತ್ತು. ಆದರೆ ಅದು ತಾಂತ್ರಿಕ ದೋಷದಿಂದ ಹೊಗೆ