ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ರೇಪ್ ಇನ್ ಇಂಡಿಯಾ ಎಂಬ ಹೇಳಿಕೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರು ಹಾಗಾದ್ರೆ ಭಾರತದಲ್ಲಿರುವ ಪ್ರತಿಯೊಬ್ಬ ಪುರುಷ ಅತ್ಯಾಚಾರಿಯೇ? ಎಂದು ಪ್ರಶ್ನಿಸುವುದರ ಮೂಲಕ ತಿರುಗೇಟು ನೀಡಿದ್ದಾರೆ.ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ರೇಪ್ ಇನ್ ಇಂಡಿಯಾ ಎಂದು ಯಾವಾಗ ಹೇಳಿದರೋ ಅಂದೇ ದೇಶದ ಎಲ್ಲ ಪುರುಷರು ಅತ್ಯಾಚಾರಿಗಳು ಎಂದು ತಿಳಿಯಿತು.