ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ ಯುವತಿಗೆ ಸಾಪ್ಟ್ ವೇರ್ ಇಂಜಿನಿಯರ್ ಹೀಗಾ ಮಾಡೋದು?

ಪುಣೆ| pavithra| Last Modified ಶನಿವಾರ, 9 ಜನವರಿ 2021 (07:20 IST)
ಪುಣೆ : 27 ವರ್ಷದ ಮಹಿಳೆ  ತನ್ನ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ  25 ವರ್ಷದ ಸಾಪ್ಟ್ ವೇರ್ ಇಂಜಿನಿಯರ್ ಒಬ್ಬ ನಕಲಿ ಖಾತೆ ರಚಿಸಿ ಅದರಲ್ಲಿ ಆಕೆಯ ಆಕ್ಷೇಪಾರ್ಹ ಫೋಟೊಗಳನ್ನು, ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾನೆ.

ಆರೋಪಿ ಹಾಗೂ ಸಂತ್ರಸ್ತೆ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಆ ವೇಳೆ ಆಕೆಯನ್ನು ಆತ ಇಷ್ಟಪಡುತ್ತಿದ್ದನಂತೆ. ಆದರೆ ಅವಳು ಅವನ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಳೆ. ಇದರಿಂದ ಬೇಸರಗೊಂಡ ಆತ ಇಂತಹ ನೀಚ ಕೃತ್ಯ ಎಸಗಿದ್ದಾನೆ.

ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :